ಬ್ರೇಕಿಂಗ್ ನ್ಯೂಸ್
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿಹಾಕಿದ ವ್ಯಕ್ತಿ !

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿಹಾಕಿದ ವ್ಯಕ್ತಿ !

ಈಜಗತ್ತು ನ್ಯೂಸ್ ಡೆಸ್ಕ್
News desk
October 10, 2025, 8:58 am
ಬೆಂಗಳೂರು : ಜಾತಿಗಣತಿ ಸಮೀಕ್ಷೆಗೆ ಹೋಗಿದ್ದ ಶಿಕ್ಷಕಿಯನ್ನ ವ್ಯಕ್ತಿಯೋರ್ವ ಕೂಡಿ ಹಾಕಿರುವ ಘಟನೆ ಬೆಂಗಳೂರು ನಗರದ ಕೋತಿ ಹೊಸಹಳ್ಳಿಯಲ್ಲಿ ಈ ಘಟನೆ ನಡೆದಿದೆ.

 ಶಿಕ್ಷಕಿ ಸುಶೀಲಮ್ಮ ಎಂಬುವವರು ಸಮೀಕ್ಷೆಗಾಗಿ ಸಂದೀಪ್ ಎಂಬುವವರ ಮನೆಯ ಬಳಿ ಹೋಗಿದ್ದರು. ಈ ವೇಳೆ ಸಂದೀಪ್ ಹಾಗೂ ಕುಟುಂಬದವರು ನೀವೇಕೆ ಇಲ್ಲಿಗೆ ಬಂದಿದ್ದೀರಿ? ನೀವು ನಿಜಕ್ಕೂ ಶಿಕ್ಷಕಿಯೇ? ನಿಮ್ಮ ಬಳಿ ಇರುವ ಐಡಿ ಕಾರ್ಡ್ ದಾಖಲೆಗಳನ್ನು ಕೊಡಿ ಎಂದು ಬಲವಂತವಾಗಿ ದಾಖಲೆಗಳನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ ಶಿಕ್ಷಕಿ ಸಮಿಕ್ಷೆ ನಡೆಸಲು ಅಡ್ದಿಪಡಿಸಿದ್ದಾರೆ. 

 ಸ್ಥಳಕ್ಕೆ ಬಂದ ಸಂದೀಪ್ ಬಳಿ ನಾನು ಶಿಕ್ಷಕಿ. ಗಣತಿ ಕಾರ್ಯಕ್ಕೆ ಬದಿದ್ದೇನೆ ಎಂದು ಸುಶೀಲಮ್ಮ ಹೇಳಿದರೂ ಕೇಳಿಲ್ಲ. ಸುಶೀಲಮ್ಮ ಬಳಿ ಇದ್ದ ದಾಖಲೆ ಕಿತ್ತುಕೊಂಡ ಸಂದೀಪ್ ಅವರನ್ನು ಮನೆಯ ಕಾಂಪೌಂಡ್ ನಲ್ಲಿ ಕೂಡಿ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಸುಶೀಲಮ್ಮ 112 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಸುಶೀಲಮ್ಮ ಅವರನ್ನು ರಕ್ಷಿಸಿದ್ದಾರೆ. ಕೋಡಿಗೆಹಳ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕ್ಷಣದ ಸುದ್ದಿ